ಕನಸು
ದಿನವೆಲ್ಲಾ ಹ್ರದಯದೊಳಗೆ
ಬೆಚ್ಚಗೆ ಇರುವ ನೀನು
ಕತ್ತಲೆ ಅವರಿಸಿ
ನಾ ಒಬ್ಬಂಟ್ಟಿಯೆಂದೆನಿಸಿದಾಗ
ಬರುವೆ ನವಿರಾದ ತಂಗಾಳಿಯಾಗಿ
ದಿನದ ಕೊನೆಗಳಿಗೆಯಲ್ಲಿ
ನನ್ನ ಹಣೆಗೆ ತಾಗುವ
ಆ ತಂಗಾಳಿಯೇ ಸಾಕು
ನಿನ್ನ ತುಟಿ ಸ್ಪರ್ಶವ
ನೆನಪಿಸಿ ದಿನದ ದಣಿವಾರಿಸಲು
ಲೋಕವೇ ಸುಖ ನಿದ್ರೆಗೆ ಜಾರಿರುವಾಗ
ನೀ ಮಾತ್ರ ನನ್ನೊಡನಿದ್ದು
ನನ್ನೊಳಗೆ ಒಂದಾಗಿ..
ನನ್ನ ಸುಖ ನಿದ್ರೆಗೆ ಜಾರಿಸಿ
ಕೋಣೆಯ ಕತ್ತಳೊಳಗೆ ಲೀನವಾಗುವೆ.
ಕಿವಿಯೊಳಗೆ ಪಿಸುಮಾತುಗಳ ಜಾರಿಸಿ
ಉಸಿರಲ್ಲಿ ಉಸಿರ ಸೇರಿಸಿ
ಬೆಳಕು ಹರಿಯೊ ಹೊತ್ತಿಗೆ ಮೌನವಾಗಿ
ಹೃದಯ ಬಡಿತದೊಳಗೆ ಸೇರುವೆ ಏಕೆ?
ನನ್ನ ಮಿಡಿತಗಳೊಳಗೆ ಒಂದಾಗಿ
ನನ್ನೀ ಅದರಗಳ ಮೂಲಕ
ಹೃದಯ ಸೇರುವ ನೀನೆಂದು
ನನ್ನ ಹೆಜ್ಜೆಗಳೊಂದಿಗೆ ಹೆಜ್ಜೆ ಹಾಕಿ
ಬೆರಳ ಸಂಧಿಗಳಲ್ಲಿ ಬೆರಳ ಸೇರಿಸಿ
ಅನಂತದ ದಿಗಂತದೆಡೆ ಕರೆದೊಯ್ಯುವೆ ಸಖ?
ಡಾಯ್ನಾ ಶರಲ್, ಲೋಬೊ.

Author
Diana Sheral, Valencia
Maria Jacintha Furtado
Kavi kalpane chennagithu.Dayana Sharal nimaghe Shubhashayagalu.Mumbharuva Dinagalali Nimma Sahithya Uttorotharakhe Belagali embha Ashaya Dondhighe .Abhivandane haaghu Abhinandhanegalu.
Reply