ಅವಳಿರುವುದೇ ಹಾಗೆ
ಹಣತೆ ಹಚ್ಚಿಡಲು
ತನ್ನ ಮರೆತು ಮನೆಯವ
ರೆಲ್ಲರನು ನೆನಪಿಸುತ
ಊಟ ಬಟ್ಟೆ ತಿಂಡಿ ತಿನಿಸು
ಗಳಲೇ ತನ್ನನೆ ಅವರಿಗಾಗಿ
ಕರಗಿಸುತಾ
ಯಾರ ತಪ್ಪಿಗೋ ಕೊನೆಗೊಂದು
ಮೂದಲಿಕೆ ಅವಗಿಳಿಗಿದ್ದದ್ದೇ
ಕಸ ಮುಸುರೆ ಮನೆಯೊಳ
ಹೊರಗ ಕೆಲಸಕ್ಕೂ ಸೈ ಎಣಿಸಿ
ದವಳಿಗೆ ಪ್ರಶಸ್ತಿಗಳೇಕೆ
ಕೃತಜ್ಞತೆಯೂ ಸಮೀಪಿಸದು
ಆವುದರ ಗೊಡವೆಯಿಲ್ಲವಳಿಗೆ
ಅವಳಿರುವುದೇ ಹಾಗೆ
ತನ್ನವರ ಬಾಳ ಬೆಳಗಲು
ಹಣತೆ ಹಚ್ಚಿಯೇ ಬಾಕಿ
ಅವರೆಲ್ಲರ ಬಾಳ ಜಂಜಾಟದಿ
ರೋಸಿ ಹೋಗುವವಳೂ ಅವಳೆ
ಸಂಕಟಗಳ ಸುಳಿಯಲ್ಲಿ ಗಿರ
ಗಿರನೆ ಸುತ್ತಿದರು ಮೂಕಿಯವಳು
ಅವಳಿಗಾಗಿ ಹಚ್ಚಿಡಿ ಹೊಸ್ತಿಲ
ಬಳಿಯೊಂದ ಹಣತೆ ಇಂದು
ಹತ್ತಿನೂಲು ಎಣ್ಣೆಯಂದದಿ ಕರಗಿ
ಹೋಗುವ ಅವಳಿಗಾಗಿ
ತನ್ನತನವನೆ ಮರೆತವಳಿಗಾಗಿ
ಪರರ ಸಂಭ್ರಮದಲಿ ತೃಪ್ತಳಾದವ
ಳಿಗಾಗಿ, ಮನೆಗಾಗಿ ಸವೆದವಳಿಗಾಗಿ
ಹಚ್ಚಿಡಿ ಹಣತೆಯೊಂದ ಅವಳಿಗಾಗಿ
- ಫೆಲ್ಸಿ ಲೋಬೊ, ದೇರೆಬೈಲ್
Shakunthala. R. Kini
ಬಹು ಸುಂದರ ಅರ್ಥಪೂರ್ಣ ಕವಿತೆ. ತಾನುರಿದು ಜಗಕೆಲ್ಲ ಬೆಳಕನೀವ ಆಕೆಗಾಗಿ ಹೊಸಿಲ ಬಳಿ ಮಾತ್ರವಲ್ಲ, ಎದೆಗೂಡಿನೊಳಗೂ ನೆನಪಿನ ಹಣತೆಯೊಂದು ನಿರಂತರ ಜ್ವಲಿಸುತಿರಲಿ. ಶಕುಂತಲಾ. ಆರ್. ಕಿಣಿ
Reply
Maĺlika yogesh
ನಿಮ್ಮ ಕವನ ತುಂಬಾ ಸುಂದರ ವಾಗಿದೆ. ಹಣತೆ ಪ್ರಜ್ವಲಿಸಲುಸಹಕರಿಸ ಬೇಕಾಗಿದೆ.
Reply
Reinita Dcosta
Very nice Felcy dear keep the good work
Reply
Sheela Sathish
ಸುಂದರ ಕವಿತೆ ಫೆಲ್ಸಿ. 😍👌
Reply
Dr B DEVADASA PAI
ಎಲ್ಲಾ ಮನೆ ಮನಗಳಲ್ಲಿರುವ "ಅವಳು" ಯೆಂಬ ನಿಜ ಹಣತೆ ಸದಾ ಉರಿಯುತ್ತಿರಲಿ. ಕವನ ಸುಂದರ ವಾಗಿದೆ.
Reply